
ಮೋಡದಿ೦ದೊಡೆದು ಬಾ ಮಳೆ
ಇಳೆಯ ಕೊಳೆಯ ಬ೦ದು ತೊಳೆ
ಹಿಗ್ಗಲಿ ಹಸಿರೆಲೆಯಲಿ ಜೀವಕಳೆ
ತೆನೆಯ ತುಂಬಲಿ ರಾಶಿ ರಾಶಿ ಬೆಳೆ
ಬಳುಕುತ ಹರಿಯಲಿ ಕಾವೇರಿ ಹೊಳೆ...
ಬಾ ಮಳೆ,
ಬ೦ದು,ಇಳೆಯ ಕೊಳೆಯ ತೊಳೆ
ಧಗೆಯ ಬೇಗೆಯಲಿ ಬೆ೦ದ ಇಳೆಯು
ನಿನ್ನ ಚು೦ಬನದಿ ಕಾಣಲಿ ಸವಿಯು
ಸೋಕಿದಾಗ ಮುತ್ತಂತ ನಿನ್ನ ಹನಿಯು
ಮಣ್ಣ ಸುಗ೦ದಧಿ ಅರಳುವಳು ಭೂದೇವಿ
ಚೆಲುವೆಯು
ನಿನ್ನ ನೋಡುವ ಮನಸಿಗೆ ಹರಿಯಲಿ
ಸುಧೆಯು
1 comments:
ನಿಮ್ಮ ಎಲ್ಲ ಕವನಗಳಲ್ಲಿ ನೀವು ನಿಸರ್ಗಕಕ್ಕೆ ಒಲಿಸಿ ಮಾಡೊ ವರ್ಣನೆಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಬೆಸಿಗೆಯಲ್ಲಿ ನಿಮ್ಮ ಮಳೆ ಕವನ ಚೆನ್ನಾಗಿದೆ.
Post a Comment