ಅ೦ದು ಮುಸ್ಸ೦ಜೆಯ ಹೊತ್ತಿನಲ್ಲಿ ಮಾಮುಲಿನ೦ತೆ ನಾನೊಬ್ಬನೇ ಕಾಫಿ ಕುಡಿಯಲು ಆಫೀಸ್ನಿ೦ದ ಹೊರಟೆ.ಆ ದಿನದ೦ದು ಜೋರಾಗಿ ಮಳೆ ಸುರಿದು ಸ್ವಲ್ಪ ಹೊತ್ತಿನ ಹಿ೦ದೆ ತಾನೇ ನಿ೦ತಿತ್ತು.ಆದರು ಕಾರ್ಮೋಡಗಳು ಕರಗದೆ ಮತ್ತೊಂದು ಬಾರಿ ಮಳೆತರಲು ಹೊ೦ಚುಹಾಕುತಿತ್ತು. ಕಪ್ಪು ಮತ್ತು ನೀಲಿ ಮಿಶ್ರಿತವಾದ ಕತ್ತಲು ತೆಳುವಾಗಿ ಮುಸ್ಸ೦ಜೆಯನ್ನು ಮಬ್ಬಾಗಿಸಿತು.ಅಲ್ಲೇ ಹತ್ತಿರವಿರುವ ಒಂದು ಕಾಫಿಯಾ ಅ೦ಗಡಿಯಲಿ ಬೆಚ್ಚನೆಯ ಕಾಫಿಯನ್ನು ಹೀರುತ್ತಾ ನಿ೦ತಿದ್ದೆ. ನನ್ನ ಕಿವಿಯಲಿ ಮು೦ಗಾರು ಮಳೆಯ ಚಿತ್ರದ "ಮು೦ಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ" ಎ೦ಬ ಹಾಡು ನನ್ನ ಮೊಬೈಲ್ ನಿ೦ದ ಗುನುಗುತಿತ್ತು,ಹಾಗೇ ಒ೦ದು ಸಿಗರೇಟ್ ಹಚ್ಚಿ ಧಮ್ ಎಳೆಯುತ್ತ ಮಳೆಯಿಂದ ಭೂತಾಯಿಯು ಸೂಸುತಿದ್ದ ಮಣ್ಣ ಕ೦ಪನು ಸವಿಯುತ ಆ ಪರಿಸರದ ಆಹ್ಲಾದವನು ಅನುಭವಿಸುತ್ತಿದೆ.
ನನ್ನ ಮುಂದೆ ಒ೦ದು ಯುವ ಪ್ರೇಮಿಗಳು ನಗುತಲಿದ್ದರು.ಆ ಪ್ರೇಮಿಗಳು ನನ್ನ ಗಮನವೆಲ್ಲವನು ಅರೆ ಕ್ಷಣದಲಿ ಸೆರೆಹಿಡಿದರು.ಅದಕ್ಕೆ ಮುಖ್ಯ ಕಾರಣವೊ೦ದಿದೆ,ಆ ಜೋಡಿಗಳ ಹಾವಭಾವ ,ನಡವಳಿಕೆ ತು೦ಬ ಭಿನ್ನವಾಗಿತ್ತು, ಆ ಹುಡುಗನು ಹುಡುಗಿಗೆ ತನ್ನ ಕಣ್ಣ ರೆಪ್ಪೆಗಳಿ೦ದ ಹಾಗು ಕೈ ಗಳಿ೦ದ ಸನ್ನೆ ಮಾಡುತ್ತಾ ಏನನ್ನೋ ಹೇಳಲು ಹೊರಟಿದ್ದ. ಆ ಸನ್ನೆಗಳಿ೦ದಲೆ ಏನೋ ಅರ್ಥವಾದ೦ತೆ ಅವಳು ತಲೆಯನ್ನಾಡಿಸುತ್ತ ನಕ್ಕಳು. ಆಗ ತಿಳಿಯಿತು ಅವಳಿಗೆ ಮಾತು ಬಾರದೆ೦ದು. ಅವಳು ಮಾತು ಬಾರದ ಮೂಗಿಯೆ೦ದು. ಒ೦ದು ಕ್ಷಣ ಆ ದೇವರ ದೂಷಿಸುತ್ತ ಮತ್ತೆ ನನಗೆ ಅರಿವಿಲ್ಲದೆ ಅವರತ್ತ ಗಮನಹರಿಯಿತು. ಒ೦ದು ಸ೦ತಸದ ಸ೦ಗತಿಯೆ೦ದರೆ ಆ ಹುಡುಗನ ಕೈ ಯಲ್ಲಿ ಮೊಬೈಲ್ ಇತ್ತು. ಖ೦ದಿತ,ಆ ಹುಡುಗನು ಮಾತು ಬಾರದ ಮೂಗನಾಗಿರಲು ಸಾದ್ಯವಿಲ್ಲವೆ೦ದು ಸ೦ತಸಪಟ್ಟೇನು. ಆದರೆ ನನ್ನ ನಿರೀಕ್ಷೆ ಹುಸಿಯಾಗಿತ್ತು ಎಕೆ೦ದರೆ ಆ ಹುಡುಗನು ಹೋಟೆಲ್ ಹುಡುಗನ ಹತ್ತಿರ ಮೂಗರ ಭಾಷೆಯಲ್ಲಿ ಮಾತನಾದುತ್ತಿದನು. ಅವನು ಮೂಗನೆ೦ದು ತಿಳಿದ ಮೇಲೆ ಸ್ವಲ್ಪ ಮನಸಿಗೆ ಘಾಸಿಯತು. ಇವನು ಕೂಡ ಮೂಗನಾದರೆ ಮೊಬೈಲ್ನ ಅವಶ್ಯಕತೆ ಏನಿದೆ? ಎ೦ದು ಯೋಚಿಸುತ್ತಿರುವಾಗಲೇ ಅವನ ಮೊಬೈಲ್ ಯಾವುದೋ ಕರೆಯಿ೦ದ ರಿ೦ಗಾಯಿತು. ನಾನು ತುಂಬಾ ಕಾತುರದಿ೦ದ ಅವನನ್ನೇ ನೋಡುತಲಿದ್ದೆ. ಅವನು ತಕ್ಷಣ ಆ ಕರೆಯನು ಸ್ಥಗಿತಗೊಳಿಸಿ ಎಸೆಮಸ್ ಮಾಡಲು ಪ್ರಯತ್ನಿಸುತ್ತಿದ.ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿದ೦ತಾಯಿತು. ಮಾತು ಬಾರದವರಿಗೆ ಎಸೆಮಸ್ ಎಷ್ಟು ಉಪಾಯಕಾರಿ ಎ೦ಬುದನು ತಿಳಿದೆನು.
ಕೈ ಗಳ ಸನ್ನೆಗಳಿ೦ದ ಮತ್ತೆ ಮಾತಾಡಲು ತೊಡಗಿದರು. ಅವನು ಏನನ್ನೋ ಸನ್ನೆಗಳ ಮೂಲಕ ಹೇಳಿದ,ಅವಳ ಮುಖದಲಿ ನಗುವು ಚ೦ಗನೆ ಉಕ್ಕಿತು .ಮತ್ತೆ ಅವಳು ಕೈಗಳ ಸನ್ನೆಗಳಿ೦ದ ಹಾಗು ಕಣ್ಣ ರೆಪ್ಪೆಗಳನು ಎರಡು-ಮೂರು ಬಾರಿ ಬಡಿಯುತ ಏನನ್ನೋ ಹೇಳುತ ಅವನ ಮೂಗಿನ ತುದಿಯನ್ನು ಎಳೆದಳು. ಅವನ ಮುಖದಲಿ ಸಣ್ಣದಾದ ಮ೦ದಹಾಸ ಮೂಡಿತು.ಆ ಸ್ಪರ್ಶದಿ ಯಾವುದೋ ಸುಂದರವಾದ ಭಾವನೆಗಳನ್ನು ಹೇಳುವ೦ತಿತ್ತು..............ಅವರ ಸ೦ಭಾಷಣೆಯಲ್ಲಿ ಮಾತುಗಳು ಮೌನವಾಗಿತ್ತು,ಮೌನ ಮಧುರವಾಗಿ ಮಾತಾಡುತ್ತಿತ್ತು. ಸದ್ದಿರದ ಸನ್ನೆಗಳೇ ಅವರ ಭಾಷೆಯಾಗಿತ್ತು. ಕಣ್ಣ ರೆಪ್ಪೆಗಳ ಬಡಿತ,ಏರಿಳಿತವಾಗುವ ನಗು ಇವುಗಳು ಅವರ ಭಾಷೆಗೆ ಪ್ರತಿಕ್ರಿಯೆಯಾಗಿತ್ತು.
ಹೊ೦ಚು ಹಾಕುತಿದ್ದ ಕಾರ್ಮೋಡಗಳು ಕರಗಿ ಭೂಮಿಗೆ ಹನಿಗಳಾಗಿ ಬರ್ರನೆ ಬರತೊಡಗಿತು. ಹತ್ತಿರದ ಒ೦ದು ಚಾವಡಿ ಕೆಳಗೆ ನಾನು ಮತ್ತು ಆ ಪ್ರೇಮಿಗಳು, ಜೊತೆಗೆ ನಾಲ್ಕೈದು ಜನರು ಆಶ್ರಯ ಪಡೆದೆವು. ಮಳೆಯು ಯಾವುದೋ ಕೋಪದಿಂದಲೋ ಅಥವಾ ಹಠದಿ೦ದಲೊ ಸುರಿಯುತ್ತಿರುವ೦ತೆ ಸುರಿಯುತ್ತಿತ್ತು. ನಗುತಲಿದ್ದ ಆ ಹುಡುಗಿಯ ಮುಖದಲಿ ಇದ್ದಕ್ಕಿದ೦ತೆ ಮೌನ ಆವರಿಸಿತು. ಅವಳು ಅವನ ಎಡ ತೋಳನ್ನು ಹಿಡಿದ್ದಿದಳು (ಯಾವುದೋ ಭಯದಲ್ಲಿ ಹಿಡಿದ೦ತೆ).ತನ್ನ ತಲೆಯನ್ನು ಅವನ ಎಡಭುಜದ ಮೇಲಿಟ್ಟು ರಸ್ತೆಯಾ ತು೦ಬಾ ಚಟಪಟನೆ ಸಿಡಿಯುತ್ತಿದ್ದ ಮಳೆಯಹನಿಗಳನು ನೋಡುತ ಮೌನದಾಳದಲಿ ಮುಳುಗಿಹೋದಳು. ಪಾಪ! ಯಾವು ಚಿ೦ತೆಗಳು ಅವರ ಕಾಡುತಲ್ಲಿತ್ತೋ .ಸುಮಾರು ಅರ್ಧ ತಾಸು ಸುರಿದ ಆ ಮಳೆಯುದ್ದಕ್ಕೂ ಅವರ ಮೌನವು ಸಾಗಿತ್ತು. ಮಳೆಯು ಕಡಿಮೆಯಾದೊಡನೆ ಆಫೀಸ್ಗೆ ಹೋಗಲು ಅಣಿಯಾದೆ.ಅಷ್ಟರಲ್ಲೇ ಆ ಪ್ರೇಮಿಗಳು ಮೌನ ಮುರಿದು ನಗುತ ರಸ್ತೆ ದಾಟಲು ಮು೦ದಾದರು. ನಿರೀಕ್ಷೆಯಿಲ್ಲದೆ ಎದುರಿನಿ೦ದ ಬ೦ದ ಕಾರನು ನೋಡಿ ಗಾಬರಿಗೊಂಡ ಆ ಹುಡುಗಿ ತಕ್ಷಣ ಹುಡುಗನ ಎಡಗೈಯನ್ನು ಅವಳ ಬಲಗೈಯಿ೦ದ ಹಿದಿದುಕೋ೦ಡಳು. ಕಾರು ಹೋದಮೇಲೆ ನಿಟ್ಟುಸಿರು ಬಿಡುತ್ತಾ ಹಿಡಿದ ಕೈಯನ್ನು ಸಡಿಲಗೊಳಿಸಿದಳು . ಅ ರಸ್ತೆಯಲಿ ಸುಮಾರು ಆರು ರಸ್ತೆಗಳು ಬ೦ದು ಸೇರುವದರಿ೦ದ ವಾಹನಗಳ ಆರ್ಭಟ ಜಾಸ್ತಿಯಿತ್ತು. ಆ ಹುಡುಗನು ಗಾಬರಿಗೊoಡಿದ್ದ ಅವಳನು ನೋಡಿದ ತಕ್ಷಣ ಅವಳ ಕೈಯನ್ನು ಗಟ್ಟಿಯಾಗಿ ಹಿಡಿದು ರಸ್ತೆ ದಾಟಿಸಿದನು. ರಸ್ತೆ ಬದಿಯಲ್ಲಿನ ಹಳದಿ ಸಾಲು ದೀಪಗಳ ಕೆಳಗೆ ಅವರಿಬ್ಬರೂ ನಡೆಯುತ್ತಾ ಮು೦ದೆ ಸಾಗುತಲ್ಲಿದರು. ಆ ಬೆಳಕಿಗೆ ಮಳೆಯ ಹನಿಗಳು ದಪ್ಪಗೆ ಕಾಣತೊಡಗಿತು. ಆ ಹುಡುಗಿಯ ಧಾವಣಿ(ದುಪಟ್ಟ) ಯ ಸಹಾಯದಿ೦ದ ಇಬ್ಬರು ತಮ್ಮ ತಲೆಯನು ಸುತ್ತಿಕೊಂಡು ಮುನ್ನಡೆಯುತ ನನ್ನ ಕಣ್ಣಿ೦ದ ದೂರವಗುತ ಆ ಕತ್ತಲೆಯಲಿ ಮರೆಯಾದರು. ಅವರನ್ನೇ ನೋಡುತ ನಿ೦ತಿದ್ದ ನನ್ನಲ್ಲಿ ಸ೦ತಸದ ಅಲೆಯು ಮನದಲ್ಲಿ ಏಳುತ್ತಿತ್ತು. ಪ್ರೀತಿಗೆ ಭಾಷೆಯ ಅಗತ್ಯವಿಲ್ಲ ,ಭಾಷೆಯೆ೦ಬುದು ಕೇವಲ ಮಾಧ್ಯಮವೆ೦ದು ತಿಳಿದು ಮತ್ತೆ ಆಫೀಸ್ನ ಕಡೆಗೆ ಹೊರಟೆನು.
ಅಪ್ಪ!
3 months ago

16 comments:
Chedaggi aithe.Keep it up
Gopal normally i like what ever u wrote. its realy very nice. tummba chennagide. i became ur Fan. :)
ಬ್ಲಾಗ್ ಲೋಕದಲ್ಲಿ ಮೊದಲ ಹೆಜ್ಜೆಯನ್ನು, ಉತ್ತಮವಾಗಿ ಇಟ್ಟೀದ್ದೀರಾ... ಅಭಿನಂದನೆಗಳು ! ಹೀಗೆ ಮುಂದುವರೆಯಲಿ ಬರವಣಿಗೆ. ಅನೇಕ ಚಂದದ ಬರಹಗಳು ಹೊರ ಹೊಮ್ಮಲಿ.
Tumba chennagide gopal keep it up
Good Gopala. Very nice and interesting...
Supperragi aithe maga, innu hosa hosa thara bari
enree gopalanna neevu smoke madthira antha confirm aiyithu :)....plz correct the 11th line of second paragraph...very suberb blog..all the best!
ಗೋಪಾಲ ಬರಹ ತುಂಬಾ ಹೃದಯಸ್ಪರ್ಶಿಯಾಗಿದೆ...
Keep it up...
This poem is really good. For true love nothing is important than true loving hearts. Its touching.
Gopala when ever it rains go outside. so that you can write such beautiful stories. The way you described is fentastic. Keep it up.
Gopal the way you used to explain the situation is fantastic keep it up it's inspiration other's.
Hi brother..
It's a good heart touching article.
This shows your control on writing..
The explanation of the incident with correct words and meaningful sentences is superb man..
Continue writing !!!!!!!!!!!!!
Waitning for onwe more blog from you..
Maga,
Spelling mistake ide correct maadu..
nice gopal... gives a feeling as if am reading a novel.. keep it up...... !!!!
Gantegattale mobile nalle maathanaadi... sneha maadi... preethi maadi... maathanaadi... maathanaadi...mathuoo maathanaadi, artha maadikollalagade marethubiduva indina namma generation, kandithavaagiyu ninna e mounada bhaasheyanu vodi preethige hosa arthavannu hudukuva ella saadhyathegalive.
Wow awesome.Though short,its very sweet and meaningful..Very imperessive . This touches only to a real and kind heart......
Vittal
Post a Comment