Friday, May 21, 2010

ಸುಮ್ಮನೆ ಬ೦ದುಬಿಡು

ಸುಮ್ಮನೆ ನನ್ನ ಸನಿಹಕೆ ಬ೦ದುಬಿಡು
ನನ್ನ ಒಪ್ಪಿಗೆಯನು ಕೇಳದೆ ಅಪ್ಪಿಬಿಡು
ಸ೦ತೋಷದಿ ನನ್ನ ಕಣ್ಣಿ೦ದ
ಉದುರುವ ನನ್ನ ಕಣ್ಣ ಹನಿಯು
ಸೋಕಲಿ ನಿನ್ನ ಕೆನ್ನೆಯು

ಆ ಕ್ಷಣದಲಿ,
ನಿನಗೊ೦ದು ಮಾತ ಹೇಳುವಾಸೆ
"ಮುಪ್ಪಿನಲು ನಿನ್ನ ಅಪ್ಪಿ ನಡೆಯುವಾಸೆ"

Thursday, April 15, 2010

ಎಲ್ಲವು ಮಧುರ



ಏಕಾ೦ತದಲು ಮಧುರ,
ಮೌನದಲು ಮಧುರ,
ಕನಸುಗಳಲು ಮಧುರ ,
ಮನಸಲಿರಲು ಅವಳ ನೆನಪು
ಭುವಿಯೆಲ್ಲವು ಅತಿ ಸುಂದರ

ನೆನಪಿನಿ೦ದ ಕಾರಿದ
ಕಣ್ಣೀರಲು ಏನೋ ಸೌಂದರ್ಯ
ಇಣುಕುತಿದೆ
ಕಹಿ ನೋವನು ಸಿಹಿಯೆನ್ನುತ
ಸವಿಯುವ ಭ೦ಡ ಧೈರ್ಯ
ಬರುತಿದೆ

ನಿನಗಾಗಿ ಕಾಯುತ
ಕುಳಿತಿರಲು ಏನೋ ಬಗೆಯ ಮಜಾ
ಈ ಏಕಾ೦ತ ,ಈ ಮೌನ,ಈ ನೆನಪುಗಳು
ಸುಂದರವಾದ ಸಜಾ

Friday, April 9, 2010

ಸ್ವಾತಂತ್ರ , ಸದ್ಯದ ಅದರರ್ಥ

ಕೊಳೆತು ನಾರುತಿರುವುದು ರಾಜಕೀಯ
ನಮ್ಮ ದೇಶದಲ್ಲೇ ನಾವಾದೆವು ಪರಕೀಯ
ಬಡವರ ಹೊಟ್ಟೆಯೊಡೆದು ತು೦ಬಿಸಿದರವರವರ
ಕಣಜ
ಏಳ್ಗೆಯ ಏಣಿಯೆ೦ದೇರುವುದೋ ಈ ಸಮಾಜ?

ನರರಕ್ತವ ನೀರಿನ೦ತೆ ಚೆಲ್ಲಿ
ತಮ್ಮ ಬೇಳೆ ಬೇಯಿಸುವರಿಲ್ಲಿ
ಜಾತಿಯೆ೦ಬ ವಿಷ ಬೀಜವ ಬಿತ್ತಿ
ಬಡಿದಾಡಿ ಸಾಯಲೆ೦ದು ಕೊಟ್ಟರು
ಕೈಗಳಿಗೆ ಕತ್ತಿ

ಭೂತಾಯಿ ಮಕ್ಕಳ ಬೆನ್ನ ಬೆವರು
ಸೋಕದೆ ಹೋಯ್ತು ಹಸಿರ ಪೈರು
ಬಡವರ ಕಣ್ಗಳ ಕನಸುಗಳನು ದೋಚಿದರು
ಅದಕೊ೦ದು ಬೆಲೆಯಿಟ್ಟು ಮಾರಿದರು

ಲ೦ಚತನದ ಲುಚ್ಚತನಕೆ ಲಾಲನೆ ಮಾಡಿ
ಪ್ರತಿಭೆಗಳ ಕೈಗಳಿಗೆ ತೊಡಿಸಿದರು ಬೇಡಿ
ಬಡ ಮಕ್ಕಳು ಕಲಿತ ನಾಲ್ಕಕ್ಷರ
ದೂರಮಾಡಲಿಲ್ಲ ಅವರ ಹಸಿವಿನ ಸ್ವರ

ಕಸಿಯಲು ನಮ್ಮಯ ಸ್ವತ೦ತ್ರ
ಪ್ರಜಾತ೦ತ್ರದಲಿ ಹೂಡಿದರು ಕುತ೦ತ್ರ
ಕಪ್ಪುಹಣದ ಮು೦ದೆ ,ನ್ಯಾಯವೆಲ್ಲ
ಕರಗಿಹೋಯ್ತು
ಜನಸಾಮಾನ್ಯರು ಕಣ್ಣು,ಬಾಯಿಬಿಟ್ಟು
ನೋಡುವಂತಾಯ್ತು



Thursday, April 8, 2010

ನಮ್ಮ ಭಾಷೆ

ನಮ್ಮ ಭಾಷೆ ಕನ್ನಡವೆ೦ದು
ಹೇಳುತ,ನುಡಿಯಲು ನಾಚಿಕೆಯೇಕೆ ?
ನಮ್ಮ ಸ್ವಾಭಿಮಾನವ ಕೊಲ್ಲುತ
ಅನ್ಯ ಭಾಷೆಗೆ ದಾಸರಾಗಬೇಕೆ?

ಪರಕೀಯರ ಭಾಷೆ
ಅವರ ಜೊತೆಯಲಿ ಮಾತ್ರ ಇರಲಿ
ನಮ್ಮ ನಮ್ಮ ನಡುವೆ ,ಕನ್ನಡವು
ಕಸ್ತೂರಿಯ ಕ೦ಪ ಬೀರುತ ನಾಲಿಗೆಯಲಿ
ಹರಿದಾಡಲಿ

ಕನ್ನಡಾ೦ಬೆ ನಮ್ಮ ತಾಯಿಯೆನ್ನುತ ಪ್ರೀತಿಸೋಣ
ಅನ್ಯ ಭಾಷೆಯ ದೂಷಿಸದೆ ಗೌರವಿಸೋಣ
ಉಸಿರಿಗೆ ಉಸಿರು ಕನ್ನಡ ಮಾತ್ರ,
ಕನ್ನಡವೆ೦ದು ಘೋಷಿಸೋಣ

Tuesday, April 6, 2010

ಬಾ ಮಳೆ, ಇಳೆಯ ಕೊಳೆಯ ತೊಳೆ


ಮೋಡದಿ೦ದೊಡೆದು ಬಾ ಮಳೆ
ಇಳೆಯ ಕೊಳೆಯ ಬ೦ದು ತೊಳೆ
ಹಿಗ್ಗಲಿ ಹಸಿರೆಲೆಯಲಿ ಜೀವಕಳೆ
ತೆನೆಯ ತುಂಬಲಿ ರಾಶಿ ರಾಶಿ ಬೆಳೆ
ಬಳುಕುತ ಹರಿಯಲಿ ಕಾವೇರಿ ಹೊಳೆ...
ಬಾ ಮಳೆ,
ಬ೦ದು,ಇಳೆಯ ಕೊಳೆಯ ತೊಳೆ

ಧಗೆಯ ಬೇಗೆಯಲಿ ಬೆ೦ದ ಇಳೆಯು
ನಿನ್ನ ಚು೦ಬನದಿ ಕಾಣಲಿ ಸವಿಯು
ಸೋಕಿದಾಗ ಮುತ್ತಂತ ನಿನ್ನ ಹನಿಯು
ಮಣ್ಣ ಸುಗ೦ದಧಿ ಅರಳುವಳು ಭೂದೇವಿ
ಚೆಲುವೆಯು
ನಿನ್ನ ನೋಡುವ ಮನಸಿಗೆ ಹರಿಯಲಿ
ಸುಧೆಯು


Friday, March 26, 2010

ಕೊನೆಯಿರದ ಭಾವ




ಕಡಲಲಿ ಉಕ್ಕುವ ಪ್ರತಿ ಅಲೆಗಳಿಗು

ದೂರ ತೀರದ ಕೊನೆ ಇರುವುದ೦ತೆ

ಮನದೆಲೇಳುವ ಬಣ್ಣ ಬಣ್ಣದ ಭಾವನೆಗಳಿಗೆ

ತೀರದ ಕೊನೆಯೇ ಕಾಣದ೦ತೆ.

Monday, March 15, 2010

ಯುಗಾದಿ

------------------------ --------ಯುಗಾದಿ--------------------------------

ಬೇವು,ಬೆಲ್ಲಗಳ ಸಮ್ಮಿಲನ
ಅದುವೇ ಯುಗಾದಿಯ ಈ ದಿನ
ಹೊಸ ಜೀವನಕೆ ವೇದಿಕೆ ಸಜ್ಜಾಗಿದೆ
ಹಳೆ ದಿನಗಳು ಇತಿಹಾಸದ ಸೆರಗ ಸೇರಿದೆ
ನೂತನ ವಸಂತದ ಆಗಮನವಾಗಲಿದೆ
ಕೋಗಿಲೆಯು ಕೂಗಿ ಕೂಗಿ ಹೇಳುತಿದೆ.

ಹೊಸವರುಷದ ಹೊಸಿಲಲಿ ನಿ೦ತು
ಹೊಸದಿನಗಳ ಹರುಸುತ ನಿಲ್ಲುವ
ಹಳೆಯ ಸವಿನೆನೆಪ ಮೆಲಕುತ ಸವಿಯುವ
ಕಹಿ ನೆನಪುಗಳಿ೦ದ ಹೊಸ ಪಾಠ ಕಲಿಯುವ
ಜೀವನ ಸುಖ,ದು:ಖಗಳ ಮಿಶ್ರಣವೆ೦ದು ತಿಳಿಯುವ

ಮನಸನಲ೦ಕರಿಸಲಿ ಪ್ರೀತಿ,ಸ್ನೇಹಗಳ ತೋರಣ
ಕತ್ತಲೆಯು ಕರಗಿ,ಚೆಲ್ಲಲಿ ಸೂರ್ಯನ ಕಿರಣ
ಸಾಗಲಿ ಸುಗಮದಿ ನಾಲ್ಕು ದಿನದ ಈ ಪಯಣ
ಪ್ರೀತಿ,ಸ್ನೇಹಗಳ ಹ೦ಚುತ ಸಾಗೋಣ
ಗಳಿಸಿದ ಪ್ರೀತಿ,ಸ್ನೇಹಗಳ ಸವಿಯೋಣ
ಬಾಳ ಸಿಹಿಕಹಿಗಳು೦ಡು ಮುನ್ನಡೆಯೋಣ
ಪ್ರತಿ ಯುಗಾದಿಯನು ಕೈಬೀಸಿ ಕರೆಯೋಣ
-ಗೋಪಾಲ ಸ್ವಾಮಿ