Friday, March 26, 2010

ಕೊನೆಯಿರದ ಭಾವ




ಕಡಲಲಿ ಉಕ್ಕುವ ಪ್ರತಿ ಅಲೆಗಳಿಗು

ದೂರ ತೀರದ ಕೊನೆ ಇರುವುದ೦ತೆ

ಮನದೆಲೇಳುವ ಬಣ್ಣ ಬಣ್ಣದ ಭಾವನೆಗಳಿಗೆ

ತೀರದ ಕೊನೆಯೇ ಕಾಣದ೦ತೆ.

Monday, March 15, 2010

ಯುಗಾದಿ

------------------------ --------ಯುಗಾದಿ--------------------------------

ಬೇವು,ಬೆಲ್ಲಗಳ ಸಮ್ಮಿಲನ
ಅದುವೇ ಯುಗಾದಿಯ ಈ ದಿನ
ಹೊಸ ಜೀವನಕೆ ವೇದಿಕೆ ಸಜ್ಜಾಗಿದೆ
ಹಳೆ ದಿನಗಳು ಇತಿಹಾಸದ ಸೆರಗ ಸೇರಿದೆ
ನೂತನ ವಸಂತದ ಆಗಮನವಾಗಲಿದೆ
ಕೋಗಿಲೆಯು ಕೂಗಿ ಕೂಗಿ ಹೇಳುತಿದೆ.

ಹೊಸವರುಷದ ಹೊಸಿಲಲಿ ನಿ೦ತು
ಹೊಸದಿನಗಳ ಹರುಸುತ ನಿಲ್ಲುವ
ಹಳೆಯ ಸವಿನೆನೆಪ ಮೆಲಕುತ ಸವಿಯುವ
ಕಹಿ ನೆನಪುಗಳಿ೦ದ ಹೊಸ ಪಾಠ ಕಲಿಯುವ
ಜೀವನ ಸುಖ,ದು:ಖಗಳ ಮಿಶ್ರಣವೆ೦ದು ತಿಳಿಯುವ

ಮನಸನಲ೦ಕರಿಸಲಿ ಪ್ರೀತಿ,ಸ್ನೇಹಗಳ ತೋರಣ
ಕತ್ತಲೆಯು ಕರಗಿ,ಚೆಲ್ಲಲಿ ಸೂರ್ಯನ ಕಿರಣ
ಸಾಗಲಿ ಸುಗಮದಿ ನಾಲ್ಕು ದಿನದ ಈ ಪಯಣ
ಪ್ರೀತಿ,ಸ್ನೇಹಗಳ ಹ೦ಚುತ ಸಾಗೋಣ
ಗಳಿಸಿದ ಪ್ರೀತಿ,ಸ್ನೇಹಗಳ ಸವಿಯೋಣ
ಬಾಳ ಸಿಹಿಕಹಿಗಳು೦ಡು ಮುನ್ನಡೆಯೋಣ
ಪ್ರತಿ ಯುಗಾದಿಯನು ಕೈಬೀಸಿ ಕರೆಯೋಣ
-ಗೋಪಾಲ ಸ್ವಾಮಿ