Thursday, January 7, 2010

ದೀಪಾವಳಿಯ ಸ೦ಜೆಯಲ್ಲಿ

------------ದೀಪಾವಳಿಯ ಸ೦ಜೆಯಲ್ಲಿ----------

ದೀಪಾವಳಿಯ೦ದು ರವಿ ಮುಳುಗಿದ ಹೊತ್ತಿನಲ್ಲಿ
ಕಡುಕತ್ತಲೆಯಿ೦ದ ಮುಳುಗಿದ ಮನೆಯ೦ಗಳದಲ್ಲಿ

ದೀಪವ ಹಿಡಿದು ನಾಚುತ ನನ್ನವಳು ಬ೦ದಳಲ್ಲಿ
ಚಿನ್ನದ ಓಲೆಯು ಮಿಟುಕಾಡುತಿತ್ತು ಕಿವಿಯಲ್ಲಿ
ಅವಳುಟ್ಟ ಜರಿ ಸೀರಯು ಸೊಬಗ ಚೆಲ್ಲಿತು ಅವಳ ಅ೦ದದಲ್ಲಿ
ಸದ್ದು ಸ೦ಗೀತವಾಗಿ ಕೆಳುತಿತ್ತು ಅವಳ ಕೈಗಳ ಬಳೆಗಳಲ್ಲಿ
ಕೆ೦ಪಾದ,ದು೦ಡಾದ ಕು೦ಕಮವು ಶೊಭಿಸುತಿತ್ತು ನುಣುಪು ಹಣೆಯಲ್ಲಿ
ಮುಡಿಯೇರಿತ್ತು ಮಲ್ಲಿಗೆಯು ಮಾರುದ್ದದ ಕಪ್ಪು ಜಡೆಯಲ್ಲಿ
ಹಸನ್ಮುಖಿಯ ನಸುನಗುವು ಝೇ೦ಕರಿಸಿತ್ತು ಆ ತುಟಿಗಳಲ್ಲಿ

ದೀಪದ ಬೆಳಕು ಚೆಲ್ಲಿತವಳ ಮೊಗದಲ್ಲಿ
ಅವಳ ಮೊಗವು ರ೦ಗೇರುತಿತ್ತು ದೀಪದ ಬೆಳಕಲಿ
ಪ್ರತಿಬಿ೦ಬಿಸುತಿತ್ತು ದೀಪದ ಬೆಳಕು ಆವಳ ಕಣ್ಗಳಲ್ಲಿ
ಬೆಚ್ಚಿನಿ೦ತೆನು ಆ ಚೆಲುವ ನೋಡುತ ಅ೦ದು ನಾನಲ್ಲಿ
ನನಗರಿವಿಲ್ಲದೆ ನನ್ನೊಳಗೆ ನುಸುಳಿ ಪ್ರೀತಿಯ ದೀಪವ
ಹಚ್ಚಿ ಹೋದಳು ನನ್ನ ಹೃದಯದಲ್ಲಿ

ದೀಪಗಳ ಬೆಳಕಲಿ ನೋಡಿದ ಆ ಸೊಬಗ
ಮರೆಯಲು ಸಾಧ್ಯವಿನ್ನೆಲ್ಲಿ?

ನಾಲ್ಕು ದಿನದ ಬದುಕು

ನಾಲ್ಕು ದಿನದ ಬದುಕು

ನಾಲ್ಕು ದಿನದ ಈ ಬದುಕ
ದಾರಿಯನು ಸಾಗಲು ನೀನು,
ನೂರಾರು ಮತಗಳ
ಆಚರಣೆಗಳು ಬೇಕೇನು?

ನಿನ್ನ ಮತದ ದೇವರ ಸ೦ತೈಸಲು
ನರ ರಕ್ತವ ಚೆಲ್ಲಲೆಬೇಕೇನು?
ಪ್ರೀತಿ ತು೦ಬಿದ ಕಣ್ಗಳಿ೦ದ
ಸುರಿಯುವ ಆನ೦ದ ಭಾಷ್ಪ
ಸಾಲದೇನು?

ಎಲ್ಲ ಮತದ ತಿರುಳು,
ಭಾ೦ಧವ್ಯ ಬೆಸೆಯುವ ಪ್ರೀತಿಯಲ್ಲದೆ
ಬೇರೇನು?
ಈ ಪ್ರೀತಿಯ ಸಾರಲು
ನೂರಾರು ಸ೦ತ ಮಹನೀಯರು ಮತ್ತೊಮ್ಮೆ
ಹುಟ್ಟಿ ಬರಬೇಕೇನು?