Friday, June 19, 2009

ನನ್ನೆದಯ ಹಾಡು





ನನ್ನೆದಯ ಹಾಡು

ನಿನ್ನ ಜೊತೆಯಲಿ ನಿಲ್ಲುವೆನು
ನಿನ್ನ ಗುರಿಯೆಡೆಗೆ ನಾನು ಬರುವೆನು

ನೀ ಸೋತು ಸೊರಗಿದಾಗ
ನಿನ್ನ ತಬ್ಬಿ ಕಣ್ಣೀರೊರೆಸುವೇನು
ನೀ ಗೆಲುವಿ೦ದ ನಲಿದಾಗ
ನಿನ್ನ ಬೆನ್ನ ತಟ್ಟಿ ಹಣೆಯಲೊ೦ದು ಮುತ್ತನಿಡುವೆನು

ನೀ ಭಯದಿ ಬೆವರುವಾಗ
ಬಳ್ಳಿಯ೦ತೆ ನಿನ್ನ ಹಬ್ಬಿ ನಿಲ್ಲುವೆನು
ನಿನ್ನ ಬದುಕಿನ ಕವಿತೆಯ
ನಿನ್ನ ಜೊತೆಯ ಕೂಡಿ ಹಾಡುವೆನು


ಬೆಳದಿ೦ಗಳ ಬೆಳಕಲೊ೦ದು ದಿನ
ನೀ ಕೊಡುವ ಕೈ ತುತ್ತ ತಿನ್ನುವೆನು
ಬೆಳ್ಳನೆಯ ಚ೦ದ್ರನ ನೋಡುತ
ನಕ್ಷತ್ರಗಳ ಎಣಿಕೆಯಷ್ಟು ಕನಸ ಕಾಣುವೆನು

ನೀ ಕ೦ಡ ಕನಸುಗಳನು
ನನ್ನ ಕನಸುಗಳೆ೦ದು ತಿಳಿಯುವೆನು
ನಿನ್ನ ಕಣ್ಗಳಲಿ ಆ ಕನಸುಗಳು
ಕರಗಿ ಕಣ್ಣೀರಾಗದ೦ತೆ ಕಾಯುವೆನು

ಸೂರ್ಯನಿಗೆ ಎದುರಾಗಿ ನಿಲ್ಲುವೆನು
ಆ ನೆರಳ ತ೦ಪಲಿ ನಿನ್ನ ಸಾಕುವೆನು
ಚಿಪ್ಪನಲ್ಲಿರುವ ಮುತ್ತ೦ತೆ ನನ್ನೆದೆಯ ಗೂಡಲಿಡುವೆನು

ನಿನ್ನ ಮನದ ಮೆದುವಾದ ಕಣ್ಣನು
ತೆರೆದು ನೋಡು ಒಮ್ಮೆ ನನ್ನ ಮನವನು
ಅಲ್ಲಿಯು ಕಾಣುವೆ ನಿನ್ನನು

(2-March -2009 )

ನನ್ನೆದೆಯ ಪಾಡು


ನೀ ನನ್ನ ನೋಡದಿದ್ದರೇನು ,
ನೀ ನನ್ನ ಪ್ರೀತಿಗೆ ಒಪ್ಪದಿದ್ದರೇನು ,
ಅಷ್ಟಕ್ಕೆ ನಾ ನಿನ್ನ ಮರೆಯುವೆನೇನು ?
ಮರೆತರೆ ಅದಕೆ ಪ್ರೀತಿಯೆ೦ದು ಹೇಳುವರೆನು

ವಿಧಿ ಬರಹಕೆ ಮಣಿದು ಸೋತುನಿ೦ತುರುವೆನು
ಬ್ರಹ್ಮನ ಮು೦ದೆ ಕೈ ಕಟ್ಟಿ ಮೊರೆಯಿಡುವೆನು
ಮು೦ದಿನ ಎಲ್ಲ ಜನ್ಮಗಳಿಗೂ ಬರೆಸುವೆನು
ನನ್ನ ಹಣೆಯಲಿ ನಿನ್ನದೇ ಹೆಸರನು

ಮುಗ್ದ ಮನಸಿನ ಮಗುವ೦ತೆ ನೀನು
ನಿನ್ನ ಕಣ್ಣಲಿ ಕಣ್ಣೀರ ನಾನೆ೦ದು ಸಹಿಸೆನು
ಸದ್ದಿರದೆ ಮೌನದಿ ಬೇಡುವೆ ಆ ದೇವರನು
ನಿನ್ನ ಕನಸುಗಳು ನನಸಾಗಲೆ೦ದು ಹರಸುವೆನು

ಪ್ರೀತಿಯ ಅಮೃತವ ಉಣಿಸಿ ಹೋದವಳು ನೀನು
ಆ ಪ್ರೀತಿಗೆ ಸಾವು ಬರಲು ಸಾದ್ಯವಿಹುದೇನು?
ನನ್ನ ಪ್ರೀತಿಯು ಸದಾ ಸೇರಲಿ ನಿನ್ನನ್ನು
ನಿನ್ನ ಪ್ರೀತಿಯ ನಿರೀಕ್ಷೆ ಕಾಡದಿರಲಿ ನನ್ನನ್ನು


(22-March 2009 )